ನಕ್ಷತ್ರ

Kannadamaya_Nakshatra

ಈ ಒಂದು ಘಟನೆ ನಿಮಗೆ ನೆನಪು ಇದ್ದೆ ಇರುತ್ತದೆ, ಕತ್ತಲಾದ ನಂತರ ಮನೆಯಲ್ಲಿ ವಿದ್ಯುತ್ ಇಲ್ಲದಿದ್ದಾಗ, ಮನೆಯಿಂದ ಹೊರಗಡೆ ಬಂದು ದೀರ್ಘವಾದ ಉಸಿರು ಎಳೆದು ತಲೆ ಮೇಲೆ ಎತ್ತಿ ನೋಡಿದರೆ ಸಾಲು ನಕ್ಷತ್ರಗಳ ಪುಂಜ, ಎತ್ತ ನೋಡಿದರು ಚುಕ್ಕಿಗಳೇ, ಆ ನಕ್ಷತ್ರಗಳು ಇರುವ ಅಗಾದವಾದ ಜಾಗವೇ ಅಂತರಿಕ್ಷ. ಕೇವಲ ನೀವು ನಾವು ಮಾತ್ರವಲ್ಲ ಸಾವಿರ ಸಾವಿರ ವರ್ಷಗಳಿಂದ ಮನುಕುಲ, ತನ್ನ ತಲೆಯನ್ನೆತ್ತಿ ಅಂತರಿಕ್ಷವನ್ನು ನೋಡುತ್ತಾ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಮಾಡುತ್ತಾ, ಹಾಗೆಯೇ ಉತ್ತರ ಹುಡುಕುತ್ತಾ, ರಾತ್ರಿಗಳನ್ನ ಕಳೆದಿದ್ದಾರೆ.

ಸಮಯ ಕಳೆದಂತೆ ಹಾಗೆಯೇ ತಾಂತ್ರಿಕ ಜಗತ್ತು ತೆರೆದುಕೊಂಡಂತೆ ಮನುಷ್ಯನು ತನ್ನಲ್ಲಿರುವ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ, ಕಣ್ಣಿಗೆ ದೂರದರ್ಶಕಗಳ ಏರಿಸಿ, ಉಪಗ್ರಹಗಳ ಕಳುಹಿಸಿ, ಗ್ರಹಗಳ ಮೇಲಿಳಿದು ಸುತ್ತಾಡುವ ಯಂತ್ರಗಳನ್ನು ಕಳುಹಿಸಿರುವುದಷ್ಟಲ್ಲದೆ, ಖುದ್ದಾಗಿ ತಾನೇ ಹೋಗಿ ಚಂದ್ರನ ಮೇಲೆ ಹೆಜ್ಜೆ ಇಟ್ಟು, ಸಾಲದಕ್ಕೆ ದೂರದಲ್ಲಿನ ನೆರೆಹೊರೆಯ ನಕ್ಷತ್ರ ಪುಂಜದ ಛಾಯಾಚಿತ್ರಗಳ ಸೆರೆಹಿಡಿಯುವಲ್ಲೂ ಯಶಸ್ವಿಯಾಗಿದ್ದಾನೆ.  ನಕ್ಷತ್ರಗಳು  ಎಷ್ಟು ಹಿರಿದಾದುದರೆಂದರೆ. ನಾವು ತಿಳಿದು ಕೊಂಡಷ್ಟು ಲೆಕ್ಕವಿತ್ತರೆ, ನೂರು ಮಹಡಿಯ ಕಟ್ಟಡದ ಮುಖ್ಯದ್ವಾರದ ಮೊದಲನೇ ಮೆಟ್ಟಿಲು ಹತ್ತಲು ನಾವಿನ್ನು ಅಣಿಯಾಗುತ್ತಿದ್ದೇವೆ ಅನ್ನಿಸುತ್ತದೆ.  ಅದೇ ರೀತಿ ನಕ್ಷತ್ರಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.